‘Break UP’ ಇಟ್ ಇಸ್ ನಾಟ್ ಎ ಡೌನ್ ಸ್ಟೇಪ್ ಆಫ್ ಎ ಲೈಫ್; ಟೇಕ್ ಇಟ್ ಈಸೀ:

images 'Break UP’ ಇಟ್ ಇಸ್ ನಾಟ್ ಎ ಡೌನ್ ಸ್ಟೇಪ್ ಆಫ್ ಎ ಲೈಫ್; ಟೇಕ್ ಇಟ್ ಈಸೀ:
Spread the love

ಬಹುಪಾಲು ಯಶಸ್ವಿ ವ್ಯಕ್ತಿಗಳಿಗೆ ಸಿಕ್ಕ ರಹಸ್ಯ ದಾರಿ..!

ಓ ಮೈ ಗಾಡ್ ಎಂದೂ ತಲೆ ಮೇಲೆ ಆಕಾಶಾನೇ ಕಳಚಿ ಬಿದ್ದೀರೋ ಹಾಗೆ ಅವನು, ಅವಳನ್ನು ತುಂಬಾ ಹಚ್ಕೊಂಡಬಿಟ್ಟೆ. ಅವಳಿಗೋಸ್ಕರ ಮನೆಯವರನ್ನು, ಸಂಬಂಧಿಕರನ್ನು ಎದುರಾಕಿಕೊಂಡಿದ್ದೆ. ಫ್ರೆಂಡ್ಸ್ಗಳನ್ನು ದೂರ ಮಾಡಿಕೊಂಡಿದ್ದೆ. ನನ್ನದು ಎಡ್ಯುಕೇಷನ್ ಅಷ್ಟಕಷ್ಟೇ!
ಅವಳಿಗಾಗಿ ನಾಲ್ಕೈದು ಕೆಲಸಾನೂ ಚೇಂಜ್ ಮಾಡಿದ್ದೆ. ಆದ್ರೆ ಅದೆಲ್ಲಾ ವೇಸ್ಟ್ ಆಗ್ಬಿಟ್ಟತ್ತಲ್ಲಾ. ಎಲ್ಲಾ ಹಾಳಾಗಿ ಹೋಯ್ತು. ನನ್ನ ಜೀವನಾನೇ ಬರ್ಬಾದಾಯ್ತು ಸ್ವಾಮಿ. ಇವಾಗ ನನಗೆ ಅಂತ ಯಾರೂ ಇಲ್ಲ. ದೇಹ ಕೂಡ ನನ್ನ ನಿಯಂತ್ರಣಕ್ಕೆ ಸಿಗ್ತಿಲ್ಲ.
ಈ ಸಮಾಜದ ಮುಂದೆ ತಲೆಯೆತ್ತಿ ಹೇಗೆ ಓಡಾಡ್ಲಿ ನೀವೇ ಹೇಳಿ. ನಿನ್ನ ಬಿಟ್ಟು ಎಲ್ಲೂ ಹೋಗಲ್ಲ, ಅದೇನೆ ಪರಿಸ್ಥಿತಿ ಬರಲೀ ನಿನ್ನೊಟ್ಟಿಗೆ ನಾ ನಿಲ್ತೇನೆ. ನೀನು ಎನ್ ಸಾಧನೆ ಮಾಡ್ಬೇಕು ಅನ್ಕೊಂಡಿದಿಯೋ ಅದನ್ನು ಮಾಡು ಆಮೇಲೆ ನಿಮ್ಮ ಕುಟುಂಬ ನಿನ್ನ ನಂಬ್ತಾರೆ. ನಮ್ಮನ್ನು ಸ್ವೀಕರಿಸಿರ್ತಾರೆ ಕೂಡ. ‘ನೀನಂದ್ರೆ ತುಂಬಾ ಇಷ್ಟ ಕಣೋ ‘ಎಂದು ಪ್ರೀತಿಯಿಂದ ಹೇಳುವಾಗ ನನ್ನ ಕಮಟು ದಿಂಬೂ ಕೂಡ ಉಯ್ಯಾಲೆಯ ನಿದ್ರೆ ಕೊಡುತ್ತಿತ್ತು.

ಬಟ್ ಮೊನ್ನೆಯಿಂದ ನಿದ್ರೆನೇ ಇಲ್ಲ. ಒದ್ದೆ ಕಣ್ಣಲ್ಲಿ ಎಷ್ಟೂ ಅಂತ ಅಳುತ್ತಾ ಇರ್ಲಿ ಒರೆಸುವ ಕೈ ಮಾಯವಾದಾಗ. ಕೆಲಸನೂ ಬೇಡ ಮನೆಯೂ ಬೇಡ ಟೊಟಲೀ ಈ ಜೀವನೇ ಬೇಡಾಗಿದೆ. ಬದುಕುವ ಉತ್ಸಾಹನೇ ಕಾಣ್ತಿಲ್ಲ. ಸುಸೈಡ್ ಮಾಡಿಕೊಳ್ಳುವ ಧೈರ್ಯನೂ ಬರ್ತಿಲ್ಲ. ಐ ಲಾಸ್ ಎವರಿಥೀಂಗ್ ಎಂದೂ ತೇವಾಂಶಭರಿತ ಕಣ್ಣುಗಳನ್ನು ತನ್ನ ಭಯಪೂರಿತ ಕೈಗಳಿಂದ ಒರೆಸಿ ನಡುಗುತ್ತಿದ್ದ. ಅವಳಿಗೆ ಅವನ್ಯಾರೋ ಸ್ಥಿತಿವಂತ ಸಿಕ್ದ, ಇಷ್ಟಾನೂ ಆಗ್ಬಿಟ್ಟಿದ್ದ. ಅವಳಿಂದ ಅವೈಡ್ ಆದ ನಾನು ಕೇಳಿದ್ದ ಒಂದೇ ಪ್ರಶ್ನೆ “ಹೇಳಿ ಹೋಗು ಕಾರಣ”. ಉತ್ತರ ನೀಡದ ಅವಳೂ ನಡುದಾರಿಯಲ್ಲಿಯೇ ನನ್ನನ್ನು ಬಿಟ್ಟು ನಡೆದಿದ್ದಳು.

ಅದೇ ದಾರಿಲಿ ಅವಳಿಗಾಗಿ ಏಕಾಂಗಿಯಾಗಿ ಕಾಯುತ್ತಾ ಚಡಪಡಿಸಿದ ದಿನಗಳಿವೆ ಎಂದೂ ಹೇಳುವಾಗ ಸೋತ ಕಣ್ಣುಗಳಲ್ಲಿ ಅವನ ಆರು ವರ್ಷದ ಪ್ರೀತಿ ಪ್ಲೇ ಆಗಿತ್ತು. ಅದೇ ಕಾಫಿ ಶಾಪ್‌ನಲ್ಲಿ ಅವಳೊಂದಿಗೆ ತನ್ನ ಸುಖ ದುಃಖಗಳನ್ನು ತುಂಬಾ ಹರಟಿದ್ದ. ಬಟ್ ಇಂದು ಆ ಕಾಫಿ ವಿಷದ ಸಿಹಿ ತಿನಿಸಾಗಿ ಕಂಡಿತ್ತು. ಅದಾಗಲೇ ನನ್ನ ಕೈಯಿಂದ ಏಳೆಂಟು ಸಿಗರೇಟ್‌ಗಳು ಸಾವನ್ನಪ್ಪಿತ್ತೇ ಹೊರತು ಅವನ ಕಣ್ಣೀರು ಮುಗಿಯಲಿಲ್ಲ. ಥೋ.., ಪಾಪ ಅವನಿಗೇನೂ ಗೊತ್ತಿತ್ತು ಬ್ರೇಕ್ ಅಪ್ ಕೂಡ ಒಂಥರ ಇಷ್ಟವಾಗುವಂತಹ ದುಃಖ ಅಂತ. ಈ ದುಃಖದ ಮಡಿಲಲ್ಲಿಯೇ ತಾನೇ ಹಲವಾರು ಸಾಧಕರು ಜನ್ಮತಾಳಿದ್ದು.

But Break up is not compulsory for success! You must know about it bro”. ಮೂವ್ ಆನ್ ಗೆಳೆಯ. ಇದೇನೂ ಡೆಡ್ ಎಂಡ್ ಅಲ್ಲ. ನಿನ್ನ ಮನಸ್ಸಿಗೆ ಸಾರಿ ಹೇಳು.., ಹೇಳೀ ಹೋಗುವ ಕಾರಣಕ್ಕಾಗಿ ಹಾತೊರೆಯುವುದನ್ನು ನಿಲ್ಲಿಸುವಂತೆ. ಆ ಬಡ್ಡಿ ಮಗಂದು ಹಾತರಗಿತ್ತಿ ಮನಸ್ಸು ನಿನ್ನ ಕಂಟ್ರೋಲ್‌ಗೆ ತಂದಕೋ. ಇಲ್ಲಿ ಕೇಳು ಮಿತ್ರ. ಅವಳು ನಿನಗೆ ಒಳ್ಳೆಯದನ್ನೇ ಮಾಡಿ ಹೋಗಿದ್ದಾಳೆ. ನೀನೂ ಸಾಧನೆಯ ಹಾದಿಯನ್ನು ತುಳಿದು ಅವಳಿಗೆ ಮುಂದೆ ಒಳ್ಳೆಯದನ್ನೇ ಮಾಡುವಂತೆ! ನಿನ್ನ ಪ್ರಕಾರ ಯಾವೂದೂ ಒಳ್ಳೆಯದೋ ಎಂಬುದು ನಿನಗೆ ಬಿಟ್ಟಿದ್ದು. ಗೋಗರೆಯುವುದನ್ನು ಕಿರುಚುವುದನ್ನು ಮೊದಲು ನಿಲ್ಲಿಸು. ನಿನ್ನ ಯಶಸ್ಸು ಮುಂದೆ ಸದ್ದು ಮಾಡಲಿ. ನನ್ನಿಂದ ಅವಳನ್ನು ಬಿಟ್ಟಿರ್ಲಿಕೆ ಆಗಲ್ಲ ಎಂಬುದು ನಿನಗೆ ನೀನು ಮಾಡಿಕೊಳ್ಳುತ್ತಿರುವ ಶುದ್ಧ ಮೋಸ. ಆ ಮೂಢನಂಬಿಕೆಯನ್ನು ನಂಬಿ ನಿನ್ನ ಅತ್ಮವಂಚನೆ ಕೈಯಾರೆ ಮಾಡಿಕೊಳ್ಳಬೇಡ. ನನ್ನೊಂದಿಗೆ ಯಾರಿಲ್ಲ. ನಾನೊಬ್ಬ ಏಕಾಂಗಿ. ನನ್ನ ಬೆನ್ನೆಲುಬಾಗಿ ನೀ ನಿಲ್ಲು. ಎಣಿಸದ್ದನ್ನೇ ಸಾಧಿಸುತ್ತೇನೆಂಬ ಯಾವ ಪೊಳ್ಳು ಭರವಸೆಯೊಂದಿಗೆ ಅವಳನ್ನು ವರಿಸಿದ್ದೆಯೋ ಅದೇ ನಿನ್ನ ಮುಂದಿದೆ.

ಈಗ ಮುಂದುವರೆಯಿಸು. ಅವಳು ನಿನ್ನ ಯೋಗ್ಯ ಮಾರ್ಗದರ್ಶಕಳಲ್ಲ ಎಂಬುದನ್ನು ಈಗಲಾದರೂ ಎಚ್ಚೆತ್ತು ಅರಿತು ಮುಂದೆ ನಡೆ. ಸೂಸೈಡ್ ಮಾಡಿಕೊಳ್ಳುವಂತೆ ತಲೆ ಕೊಡುವ ಬದಲು ಅದೇ ಶಿರವನ್ನು ನಿನ್ನ ಸ್ವಭಿವೃದ್ಧಿಗೆ ಬಳಸಿಕೋ. ನೆನಪಿದೆಯಾ ಮಿತ್ರ. ಅವಳಿಗೋಸ್ಕರ ನಿನ್ನ ಪೋಷಕರನ್ನು ದೂರ ಮಾಡಿ ಅವರೊಟ್ಟಗಿನ ಸಮಯವನ್ನು ತೀರಾ ಕಡಿಮೆ ಬೆಲೆಗೆ ಮಾರಿದ್ದು! ಆವಾಗಲೂ ಇದೇ ರೀತಿ ಅವರಿಗೆ ನಿನ್ನ ನಂಬಿಕೆದ್ರೋಹ ಹಾಸಿಗೆಯಂತೆ ಸುರುಳಿ ಮಾಡಿ ಮೂಲೆಗಟ್ಟಿದ್ದು ನೆನಪಿದೆಯೋ! ಕಣ್ಮುಂದೆ ನಿನ್ನನ್ನು ಹಂಗಿಸಿದಾಗೆ ನಡೆದುಕೊಂಡರೂ ಅವರ ಬೆವರ ಹನಿಯಲ್ಲಿಯೇ ನಿನ್ನ ಜೀವನದ ಚಿಗುರೆಲೆ ಉಮ್ಮುತ್ತಿತ್ತು. ಮೋಸ ಹೋದೆನೆಂದು ಕಿರುಚಿತ್ತಿದ್ದೀಯಾ ಬಟ್ ಅಸಲಿಗೆ ಮೊದಲು ಮೋಸ ಹೋಗಿದ್ದು ಯಾರು? ಪ್ರೀತಿ ಮಾಡೋದೆ ತಪ್ಪಾ ಎಂಬ ಪ್ರಶ್ನೆಯನ್ನು ಈಗ ನಿನ್ನ ಮನಸಿನ ಕೊಳೆಯ ಕೊಳದಲ್ಲಿ ಒಮ್ಮೆ ಅದ್ದಿ ತೆಗೆದು ನೋಡು! ನಿನ್ನ ಲವ್‌ಗೆ ಅಯೋಗ್ಯಳಾದವಳಿಗೆ ನಿನ್ನ ಜೀವ ಬಲಿ ಕೊಡುವ ಬದಲು ಪೋಷಕರ ಪ್ರೀತಿಗೆ ನೀನು ಅರ್ಹನಾಗು. ಸೂಸೈಡ್ ಮೂಲಕ ಪ್ರೀತಿಯನ್ನು ಅವಳಿಗೆ ಅರ್ಥ ಮಾಡಿಸುವಷ್ಟು ನಿನ್ನ ಲವ್ ಆಆ? ನನ್ನದೊಂದು ಪ್ರಶ್ನೆ ಮಿತ್ರ .., ಪ್ರೀತಿಯನ್ನು ಆ ಅಯೋಗ್ಯಗಳಿಗೆ ಅರ್ಥಮಾಡಿಸುವಷ್ಟು ಜರೂರತ್ ಏನಿದೆ? ನಿನ್ನ ಪಾಲಕರ ಗತಿಯೇನು ಬಾಸ್, ಅಸಲಿಗೆ ಅವರೇನೂ ನಿನಗೆ ಮೋಸ ಮಾಡಿದ್ದಾರೆ! ಮಾಡಿದ್ದು ನೀನೆ. ನಿನ್ನ ಪ್ರೀತಿಯೇ. ಈ ದುಃಖದ ತೆಪ್ಪ ಬಿಟ್ಟು ತೆಪ್ಪಗೆ ಮುಂದೆ ಸಾಗು. ಜೀವನ ನಿನಗಾಗಿ ಕಾದು ಕುಳಿತಿದೆ. ಹುಡುಕು ನಿನ್ನ ಯಶಸ್ಸಿನ ದಾರಿಗಳನ್ನು. ದಾರಿ ಸಿಕ್ಕ ಮೇಲೆ ನೆರಳಿಗಾಗಿ ಒಂದೆಡೆ ನಿಲ್ಲದೆ ಮುಂದೆ ಸಾಗು. ಅಲ್ಲಿಯೇ ನಾವಿಬ್ಬರೂ ಭೇಟಿಯಾಗೋಣವೆಂದು ಸದ್ಯಕ್ಕೆ ಇಬ್ಬರೂ ಆ ಕಾಫಿ ಶಾಫ್ ತೊರೆದಿದ್ದೇವೆ. ಮತ್ತೇ ಸಿಗೋಣಾ.

ಇಂತಿ ನಿಮ್ಮವ ಅವಿನಾಶ ಆಗೇರ ಅವರ್ಸಾ