ಶಾಲೆ ಕಲಿತು ಕಾಲೇಜ್ ಹತ್ತಿ ಡಿಗ್ರಿಯೂ ಪಡೆದು ಹಾಗೋ ಹೀಗೋ ಮಾಡಿ, ಒಂದು ಕೆಲಸವನ್ನೋ ಹುಡುಕಿಕೊಂಡಿರುತ್ತೇವೆ. ಜಾಬ್‌ನ ಕಟ್ಟುಪಾಡೊಳಗೆ ಒಲ್ಲದ ಮನಸ್ಸಿಂದ ದಿನ ಕಳೆಯುತ್ತಿರುವಾಗ ನಮಗೇ ಅರಿವಿಲ್ಲದೇ ಅದರೊಳಗೆ ನುಸುಳಿರುತ್ತೇವೆ. ಅತ್ತ ಪ್ರೀತಿ, ಮನೆ, ಮದುವೆ, ಮಕ್ಕಳು ಅದೂ ಇದೂ ಹಾಳೂ ಮೂಳೂ ಅಂತ ಅರ್ಧ ಆಯುಷ್ಯವನ್ನೇ ಕಳೆದಿರುತ್ತೇವೆ. ಆರ್ಥಿಕ, ಸಾಮಾಜಿಕ ಸ್ಥಿತಿಗತಿಗಳನ್ನು ಗಟ್ಟಿಮಾಡಿಕೊಳ್ಳುತ್ತಾ ನೈತಿಕ ಸಂಬಂಧಗಳಿಂದಲೇ ದೂರವಾಗಿರುತ್ತೇವೆ. ಒಂಟಿತನದ ಖಿನ್ನತೆ ಆವರಿಸಿದ್ದರೂ ಸಮಯವೇ ಸಾಕಾಗುತ್ತಿಲ್ಲ ಎಂದೂ ನಮ್ಮ ಬೆನ್ನ ನಾವೇ ತಟ್ಟಿಕೊಂಡು ಓಡಾಡುತ್ತಿರುತ್ತೇವೆ. ನಮ್ಮ ಲೈಫ್‌ನಲ್ಲಿ ನಾವೂ ಎಷ್ಟೇ ಬ್ಯುಸಿಯಾಗಿದ್ದರೂ ಸಂಬಂಧಗಳಿಗೆ ಬೆಲೆ ಕೊಡಬೇಕು. ನಮ್ಮ ಸಮಯದಲ್ಲಿ ಕೊಂಚ ಸಮಯ ಅವರಿಗೆ ಕಡಿಮೆ ರೇಟಿಗೆ ಮಾರುವ ಮೂಲಕ ಸಂಬಂಧದ ಬೆಲೆ ತುಂಬಬಹುದು. ಈ ಸಂಬಂಧಗಳಲ್ಲಿ ಗುರು ಶಿಷ್ಯರ ಸಂಬಂಧವೂ ಒಂದು ಎಂಬುದನ್ನು ತಿಳಿಯಲು ಇಂದಿನ ತಲೆಮಾರು ವಿಫಲವಾಗುತ್ತಿದೆ. Why not try..?
I am very sorry ಓದುಗ ಪ್ರಭುಗಳೆ! ಇಂದು ನಾನು ಹರಟಲು ಬಂದ ವಿಷಯನೇ ಮರೆತೆಬಿಟ್ಟೆ ನೋಡಿ. Yes I really happy to say this. Today is my one of the favourite teacher’s birthday. ಅವರೇ ಪ್ರಸ್ತುತ ಅವರ್ಸಾದ ಗಂಡು ಮಕ್ಕಳ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಗಂಗಾ ಮಡಿವಾಳ. ಗುರು ಶಿಷ್ಯರ ಸಂಬಂಧವನ್ನು ವಿವರಿಸಲು ಅಸಾಧ್ಯ. ಅದೇನೋ ಗೊತ್ತಿಲ್ಲ ನನಗೆ ಅವರ ಮೇಲೆ ಎಲ್ಲಿಲ್ಲದ ಭಯ, ಭಕ್ತಿ, ಪ್ರೀತಿ, ಕಾಳಜಿ ಇತ್ಯಾದಿ. ಒಟ್ಟಿನಲ್ಲಿ ನನಗೆ ಅವರಲ್ಲಿ ದೈವಿಕ ಅಂಶ ಕಣ್ತೆರೆಯುತ್ತದೆ. ನಿಮ್ಮ ಈ ವರ್ಷದ ಹುಟ್ಟುಹಬ್ಬಕ್ಕೆ ನನ್ನದೊಂದು ಚಿಕ್ಕ ಶುಭಾಶಯ ಪತ್ರ.
ಕರುಗುತಿರುವ ನಿಮ್ಮ ಆಯುಷ್ಯ ಹೊಸ ಕನಸುಗಳೊಂದಿಗೆ ಪುನಃ ಚಿಗುರೊಡೆಯಲಿ. ನಿಮ್ಮ ಆಯುಷ್ಯದ ತೆಕ್ಕೆಯಲ್ಲಿ ಇನ್ನೂ ಹೆಚ್ಚಿನ ಆರೋಗ್ಯಪೂರ್ಣ ದಿನಗಳು ಸಿಗಲಿ. ನಿಮ್ಮ ಜೀವನದಲ್ಲಿ ಉತ್ಸಾಹ ಹುಮ್ಮಸ್ಸು ತುಂಬಿದ ಕೊಡದಂತೆ ತುಳಕಲಿ. ನಿಮ್ಮ ಜ್ಞಾನದ ಭಿಕ್ಷೆಯಲ್ಲಿ ಬೆಳೆದ ನಮ್ಮಂತಹ ಶಿಷ್ಯವೃಂದದ ಶುಭಹಾರೈಕೆಗಳು ನಿಮ್ಮನ್ನೂ ಯಾವಾಗಲೂ ಕಾಯುತಿರಲಿ. ಮಧುಮನಸಿನ ಒಡತಿಯಾದ ನಿಮ್ಮ ವ್ಯಕ್ತಿತ್ವ ವಿದ್ಯಾರ್ಥಿಗಳ ಪ್ರೇರಣೆಯಾಗಲಿ. ಶಾಲಾ ಮಕ್ಕಳ ನಿಷ್ಕಲ್ಮಶದ ನಗು ನಿಮ್ಮ ಆರೋಗ್ಯದ ಮಟ್ಟವನ್ನು ಇನ್ನೂ ಉತ್ತಮ ದರ್ಜೆಗೇರಿಸಲಿ. ಈ ಮೂಲಕ ಸಿಕ್ಕ ಪದಪುಂಜದಲ್ಲಿಯೇ ಶುಭಾಶಯ ಕೋರುತಿರುವೆ. ಹುಟ್ಟು ಹಬ್ಬದ ಹೃನ್ಮನತೆಯ ಶುಭಾಶಯಗಳು. ಇದೇ ನಿಮ್ಮ ಅವಿನಾಶ ನಿಮಗೆ ನೀಡುತ್ತಿರುವ ಕಿರು ಕಾಣಿಕೆ. ಈ ಕಾಣಿಕೆ ನಿಮ್ಮ ಮನದಪಟಲದಲ್ಲಿ ಅಚಲವಾಗಿ ಉಳಿಯುವುದು ಎಂಬುದು ಓದುಗ ಪ್ರಭುಗಳ ಹಾರೈಕೆ.
ನೋಡಿ ಫ್ರೆಂಡ್ಸ್, This is what I came to say.
ವರ್ಷಕ್ಕೊಮ್ಮೆಯಾದರೂ ನಿಮ್ಮ ಫೇವರೆಟ್ ಟೀಚರನೊಮ್ಮೆ ಮಾತನಾಡಿಸಿ. ಆ ಸಂವಹನ ಮೊಬೈಲೋ, ಪತ್ರವೋ, ಭೇಟಿಯೋ ನಿಮ್ಮ ಅನುಕೂಲಕ್ಕೆ ಬಿಟ್ಟಿದ್ದು. ನಂತರ ಅವರ ಖುಷಿ ನೋಡಿ. ಯಾಂತ್ರಿಕತೆಯ ಬದುಕಿನ ಗಾಡಿ ನೂಕುತಿರುವ ನಿಮ್ಮಲ್ಲಿ ಅವರ ಮೂಲಕ ಆನಂದದ ಹರಾಜು ಕಡಿಮೆ ಬೆಲೆಗೆ ಸಿಕ್ಕಿರುತ್ತದೆ. ಒಮ್ಮೆ ಹಳೆಯ ನನೆಪುಗಳನ್ನು ನನೆಸಿ ನಿಮ್ಮ ಸ್ಮೃತಿಪಟಲವನ್ನು ಉಲ್ಲಾಸಗೊಳಿಸುತ್ತಾರೆ. ಮಾರನೇ ದಿನ ತಮ್ಮ ವಿದ್ಯಾರ್ಥಿಗಳ ಮುಂದೆ ನಿಮ್ಮ ಗುಣಗಾನ ಮಾಡಿ ಸಂತೋಷಗೊಂಡಿರುತ್ತಾರೆ. ಸಹೋದ್ಯೋಗಿಗಳ ನಡುವೆ ನಿಮ್ಮ ವಿಷಯ ಹಲುಬಿರುತ್ತಾರೆ. ಆ ಖುಷಿಗೆ ಎಲ್ಲೆ ಎಲ್ಲಿ! ನಿಮ್ಮವರಿಗಾಗಿ ನೀವು ನೀಡುವ ಸಮಯದಲ್ಲಿ ನಿಮ್ಮ ಟೀಚರ್‌ಗಳಿಗೂ ಪಾಲಿದ್ದಲ್ಲಿ ಅದು ನಿಮಗೆ ಆನಂದ ಆಶೀರ್ವಾದ ಮೂಲಕ ನಿಮ್ಮನ್ನೇ ಸೇರಿರುತ್ತದೆ ಎಂಬುದು ಲಾಭಿಧಾರರಿಗೊಂದು ತಿಳುವಳಿಕೆ. This article dedicated to one of my favourite teacher Ganga madiwal.
ಇಂತಿ ನಿಮ್ಮವ ಅವಿನಾಶ ಆಗೇರ ಅವರ್ಸಾ