ನಾವು ಇನ್ನೊಬ್ಬರಿಗೆ ಕೊಡಬಹುದಾದ ಬೆಸ್ಟ್ ಗಿಫ್ಟ್ Yea That’s Time

download ನಾವು ಇನ್ನೊಬ್ಬರಿಗೆ ಕೊಡಬಹುದಾದ ಬೆಸ್ಟ್ ಗಿಫ್ಟ್ Yea That's Time
Spread the love

ನಂಗೆ ಅವಳೆಂದರೆ ತುಂಬಾ ಇಷ್ಟ ಮರಾಯಾ. ನನ್ನದು ಪ್ರೀತಿ ಎಲ್ಲರಂತಲ್ಲ. ಡಿಪರೆಂಟ್‌ನಲ್ಲಿಯೇ ಟೂ ಮಚ್ ಡಿಪರೆಂಟ್ ಗೊತ್ತು! ನಿಂಗೊತ್ತಲ್ವಾ ನಾವಿಬ್ರೂ ಯಾವ್ ರೇಂಜ್‌ಗೆ ಪ್ರೀತಿ ಮಾಡ್ತೀವಿ ಅಂತ. ಮಚ್ಚಾ ಇದೇ ಬರುವ ೨೨ ನನ್ನ ಪ್ರೇಯಸಿಯ ಬರ್ತ್ಡೇ. ಏನಾದ್ರೂ ಸ್ಪೆಷಲ್ ಗಿಫ್ಟ್ ಕೊಡ್ಬೇಕು. ಒಳ್ಳೆ ಐಡಿಯಾ ಇದ್ರೆ ಕೊಡು. ಹೋದ ವರ್ಷದ ಹಾಗೆ ಲೆಟರೋ ಟ್ರೀ ಪೊಟ್ ಅಂತ ಹಾಳೂ ಮೂಳೂ ಐಡಿಯಾ ಕೊಟ್ರೇ ನೀನು ಆ ಡಬ್ಬ ಆಂಟಿ ಜೊತೆ ಮಾತಾಡೊದನ್ನ ಶ್ವೇತಾ ಹತ್ರ ಹೇಳ್ಕೋಡ್ತಿನಿ ಅಂತ ಬೈಯುತ್ತಾ ಇರುವಾಗ್ಲೇ ವಿಜಯ್ ಕಿಂಗ್‌ಫೀಶರ್ ನಾ ಪಕ್ಕಕಿಟ್ಟು ತುಟಿಗೆ ಸಿಗರೇಟ್ ಹಚ್ಕೊಂಡ. ಹೌದು ಈ ಬೋಳಿಮಗನ ಐಡಿಯಾ ನೆಚ್ಕೊಂಡು ಕೂತ್ರೆ ಅಷ್ಟೇ! ಆ ಸಂಜಯ್ ಬೇರೆ ಅದ್ಯಾವಾಗ ನಮ್ಮಿಬ್ಬರ ಮಿಡಲ್ ಬಂದ್ನೋ ಗೊತ್ತಿಲ್ಲ. ಇವಳು ಅವ್ನ ಬಗ್ಗೆ ಹೇಳುವಾಗ್ಲೆಲ್ಲಾ ಮೈಯೆಲ್ಲಾ ಉರಿಯತ್ತೆ. ಅವ್ನಿಗೆ ಲವರ್ ಸಿಗೋ ತನಕ ಸ್ವಲ್ಪ ತಲೆಬಿಸಿನೇ! ಅವ್ನ ಲೈಫಲೂ ಹುಡುಗಿ ಬಂದ್ಮೇಲೆ ನಮ್ಮಂತವರ ಕಷ್ಟ ಸುಡಗಾಡ್ ಎಲ್ಲಾ ತಿಳೀಯತ್ತೆ. ಹೌದು ಮರಯಾ ಇವ್ಳು ಹಾಗೆ ಮಾಡ್ತಾಳೆ. ಹೋದ್ಸಲ ಬರ್ತ್ಡೇಗೆ ಅವ್ನು ಅದ್ಯಾವ್ದೋ ಬ್ರಾö್ಯಂಡೆಡ್ ವಾಚ್ ಕೊಟ್ನಂತೆ. ತುಂಬಾ ಇಷ್ಟ ಆಯ್ತಂತೆ. ಇವ್ಳು ಅವ್ನ ಹತ್ರ ವಾಚ್ ಯಾಕೆ ತಗೋಬೇಕಿತ್ತು. ಹೋದ್ಸಲ ನಾ ಕೊಟ್ಟಿದ್ದು ಅವ್ಳ ಪೊಟೋ ಫ್ರೇಮ್ ಬಟ್ ಅದ್ರ ಬಗ್ಗೆ ಒಂದ್ ಮಾತಿಲ್ಲ. ಎಲ್ಲ ನನ್ನ ಕರ್ಮ ಆವತ್ತು ನನ್ನ ಕೈಯಲ್ಲಿ ಇದ್ದದ್ದೂ ಅಷ್ಟೇ ದುಡ್ಡು. ಇವ್ಳ ಮನ್ಸಲ್ಲೂ ಆ ಬ್ರಾö್ಯಂಡೆಡ್ ವಾಚ್ ಎಲ್ಲಿ ನಾಕೊಟ್ಟ ಪೊಟೋ ಫ್ರೆಮ್ ಎಲ್ಲಿ..!

ಅಸಲಿಗೆ ಈ ಪ್ರೀತಿಗೆ ಸಂಬಂಧಗಳಿಗೆಲ್ಲಾ ಗಿಫ್ಟ್ ವರ್ಕೌಟ್ ಆಗುತ್ತ ! ದುಬಾರಿ ಗಿಫ್ಟ್ ಕೊಟ್ಟವರಷ್ಟೇ ಕೊನೆವರೆಗೂ ನೆನಪಿನ ಬುತ್ತಿಯಲ್ಲಿರುತ್ತಾರಾ! ಪ್ರೀತಿಯನ್ನು ಅಳೆಯುವುದು ಈ ಎಕ್ಸ್ ಚೇಂಜ್ ಗಿಫ್ಟ್ಗಳ ಸಂಖ್ಯೆಯಿಂದಲಾ! ಇದರಿಂದ ಸಂಬಂಧ ಗಟ್ಟಿಯಾಗಿರುತ್ತೆ ಅಂತ ಅನ್ಕೋಂಡಿದ್ರೆ You are the one of foolish fellow in the earth. You know its wrong! ಒಮ್ಮೆ ನೆನೆಸಿಕೋ. ನಿನಗೆ ಏನನ್ನೂ ಗಿಫ್ಟ್ ನೀಡದ ವ್ಯಕ್ತಿಗಳ ಮೇಲೆಲ್ಲಾ ಋಣಾತ್ಮಕ ಭಾವನೆಗಳೆ ತುಂಬಿ ಕೊಂಡಿದೇಯಾ? ಇಲ್ಲವಲ್ಲ ಹಾಗಾದರೆ ಈ ಗಿಫ್ಟ್ ಗಳಿಂದ ಸಂಬಂಧ ಅಳೆಯುವ ನಿರುಪದ್ರವಿ ಯೋಚನೆ ಯಾಕೆ ಗೆಳೆಯ. ನಿನ್ನವಳು ಯಾವತ್ತೂ ನಿನ್ನ ಪ್ರೀತಿನಾ ವಸ್ತುಗಳಿಂದ ಅಳೆಯಲ್ಲ. ಭಾವನೆಗಳಿಗೆ ಸ್ಪಂದಿಸುತ್ತಾಳೆ. Actully ಅವಳು ನೀನು ಕೊಟ್ಟ ಗಿಫ್ಟ್ ಮೇಲೆ ವಾದ ಮಾಡುತ್ತಿದ್ದಾಳೋ! ಯೋಚಿಸು Its not called love. ಬಟ್ ಕೆಲವು ಪ್ರೀತಿ ಕೂಡ ವಾದಕ್ಕೀಳಿಯುತ್ತವೆ. ಅಲ್ಲಿ ರೀತಿ ಭಿನ್ನವಾಗಿರುತ್ತದೆ.

ಅವಳಿಗೆ ಅವನ ಮೇಲೆ ಅದೇನೋ ಹೇಳಿಕೊಳ್ಳಲಾಗದಂತಹ ನೋವು. ಮೊದ್ ಮೊದ್ಲು ತುಂಬಾನೆ ಇಷ್ಟಪಡ್ತಿದ್ದ. ಆದ್ರೆ ಈಗೀಗ ಅವ್ನಿಗೆ ನನ್ನ ಜೊತೆ ಮಾತಾಡ್ಲಿಕೆ ಟೈಮ್ ನೇ ಸಿಗ್ತಿಲ್ಲಾ ಅಂತೆ. ಯಾವಾಗ್ಲೂ ನನ್ನ ಜೊತೆನೆ ಇರು ತರ ಹಿಂಸೆ ಕೊಟ್ಟಿಲ್ಲ. ಎಲ್ಲರಿಗೂ ಟೈಮ್ ಕೊಡೊ ಹಾಗೇ ನನ್ ಹತ್ರಾನೂ ಸ್ವಲ್ಪ ಮಾತಾಡಬಹುದಲ್ವಾ! Atleast ದಿನದಲ್ಲಿ ೧೦ ನಿಮಿಷಾನಾದ್ರೂ ನನ್ನ ಜೊತೆ ಪ್ರೀತಿಯಿಂದ ಮಾತನಾಡು ಅಷ್ಟೇ ನಾನು ಬೇಡಿಕೊಳ್ಳುವುದು. ಹೀಗಂದ್ರೂ ಕೆಲಸ ಕೆಲಸ ಹೇಳಿ ಸಲೀಸಾಗಿ ಜಾರಿಕೊಳ್ತಾನೆ. ಬಟ್ ಆ ಯೂಸ್ಲೆಸ್ ಫ್ರೆಂಡ್ಸ್ ಜೊತೆ ಅಲ್ಲಿ ಬೈಕ್ ಮೇಲೆ ಕುತ್ಕೊಂಡು ಹರಟುತ್ತಾ ಇರ್ತಾರೆ. ಅದಲ್ಲದೇ ಕೈಯಲ್ಲಿ ಆ ವಾಯುಪುತ್ರ (ಸಿಗರೇಟ್) ಬೇರೆ. ಅದೊಂದು ಕಲ್ತಿದಾನೆ ಅವ್ರಿಂದ. ಹೇಳಿದ್ರೆ ಕೋಪ ಒಂದು ಬೇಗಬರುತ್ತೆ ಎಂದು ಬಿಸಿಯುಸಿರಿನಲ್ಲಿ ವಟವಟ ಅಂದರೂ ನೊಂದುಕೊಳ್ಳುವ ಆ ಮುಗ್ಧ ಮನಸ್ಸನ್ನು ಕಳೆದುಕೊಳ್ಳಬೇಡಿ.

ಅಂತಹ ಪ್ರಿಯತಮೆಗೆ ನಿಮ್ಮಿಂದ ಗಿಫ್ಟ್ ನಿರೀಕ್ಷೆಯಿಲ್ಲ ಬದಲು ಅವಳು ನಿಮ್ಮಿಂದ ಕೊಂಚ ಕೊಂಚವೇ ಟೈಮ್ ಕೇಳ್ತಿದಾಳೆ. ದಯವಿಟ್ಟು ಧಾರೆಯೆರಿಯಿರಿ. ಅಂತಹವರಿಗಾಗಿ ಹಿಂದೆಮುಂದೆ ನೋಡಬೇಡಿ. ನೀವೇ ಗಮನಿಸಿ ಅವಳು ಎಷ್ಟೊಂದು ಸಂತುಷ್ಟಳಾಗಿರುತ್ತಾಳೆಂದು! ಈ ಪರಿ ಉಡುಗೊರೆಗಾಗಿ ನೀವು ತಲೆಕೆಡಿಸಿಕೊಳ್ಳುವುದು ವ್ಯರ್ಥ. ಹಣದ ಮೇಲೆ ನಿಂತ ಸಂಬಂಧ ಭಾವೆನೆಗಳ ಸೆಳೆತ ಅನುಭವಿಸುವುದಿಲ್ಲ. ನೀವು ನಿಮ್ಮವರಿಗೆ ಕೊಡಬಹುದಾದ ಅತ್ಯುತ್ತಮ ಗಿಫ್ಟ್ಗಳ ಪೈಕಿ ಟೈಮ್ ಅಗ್ರಸ್ಥಾನ. ನಿಮ್ಮ ಸಂಬಂಧ ಸರಿಯಾದ ರೀತಿಯಲ್ಲಿ ನಡೆಯಲು ಟೈಮ್ ನಂತಹ ಮಿತ್ರ ಮತ್ತೊಂದಿಲ್ಲ. ನೀವು ಸಮಯವನ್ನು ಯಾವುದಕ್ಕೆ ಮೀಸಲಿಡುತ್ತಿರೋ ಅದು ಖಂಡಿತ ಫಲಿತಾಂಶ ನೀಡುತ್ತದೆ. ಫಲಿತಾಂಶದ ಪ್ರಮಾಣ ರೀತಿ ನಿಮ್ಮ ಮೇಲೆ ಅವಲಂಬಿಸಿರುತ್ತದೆ. ನೀವು ನಿಮ್ಮವರಿಗಾಗಿ ಕೊಡಬಹುದಾದ ಬೆಸ್ಟ್ ಗಿಫ್ಟ್ Exactly that Is Time. 

ಇಂತಿ ನಿಮ್ಮವ ಅವಿನಾಶ ಆಗೇರ ಅವರ್ಸಾ